ಲಾಕ್ಡೌನ್ ಇದ್ರೂ ಕ್ಯಾರೇ ಇಲ್ಲ.. ಚಾರ್ಮಿನಾರ್ ಬಳಿ ಫುಲ್ ಶಾಪಿಂಗ್ - ಹೈದರಾಬಾದ್ನ ಚಾರ್ಮಿನಾರ್
ಹೈದರಾಬಾದ್: ಕೋವಿಡ್ ನಿಯಂತ್ರಿಸಲು ತೆಲಂಗಾಣದಲ್ಲಿ 10 ದಿನಗಳ ಲಾಕ್ಡೌನ್ ಘೋಷಣೆಯಾಗಿದ್ದು, ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ನಾಳೆ ಈದ್ ಹಬ್ಬದ ಪ್ರಯುಕ್ತ ಇಂದು ಹೈದರಾಬಾದ್ನ ಚಾರ್ಮಿನಾರ್ ಇರುವ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಶಾಪಿಂಗ್ ಮಾಡಲು ಜನಸಮೂಹವೇ ಸೇರಿದ್ದಾರೆ.