ಕೊರೊನಾಗೆ ಡೋಂಟ್ ಕೇರ್: ಬಿಜೆಪಿ ಮಾಜಿ ಸಚಿವರ ಮೊಮ್ಮಗಳ ಮದುವೆಯಲ್ಲಿ ಜನಸಾಗರ - covid rules violation
ತಾಪಿ (ಗುಜರಾತ್): ವಿವಾಹ ಸಮಾರಂಭಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಸಾಮಾನ್ಯ ಜನರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ದೊಡ್ಡವರು ಏನು ಮಾಡಿದ್ರೂ ಕೇಳೋರಿಲ್ಲ ಎನ್ನೋದಕ್ಕೆ ಗುಜರಾತ್ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಇಲ್ಲಿನ ತಾಪಿ ಜಿಲ್ಲೆಯ ಸೊಂಗಾಧ್ನಲ್ಲಿ ಬಿಜೆಪಿ ಮಾಜಿ ಸಚಿವ ಕಾಂತಿ ಗಮಿತ್ ಅವರ ಮೊಮ್ಮಗಳ ಮದುವೆಗೆ ಸಾವಿರಾರು ಜನರು ಆಗಮಿಸಿ, ಯಾವುದೇ ನಿಯಮ ಪಾಲಿಸದೆ ಕುಣಿದು ಕುಪ್ಪಳಿಸಿದ್ದಾರೆ.