ಲೋಕಸಭೆಯಲ್ಲಿ ಪಿ.ಸಿ.ಮೋಹನ್ ಮಾತು... ಹೆಚ್ಎಎಲ್ ಸೇವೆ ನೆನೆದ ಸಂಸದ - ರಕ್ಷಣಾ ವಲಯ
ನವದೆಹಲಿ: ಲೋಕಸಭೆ ಕಲಾಪದಲ್ಲಿ ರಾಷ್ಟ್ರಪತಿ ಭಾಷಣ ಕುರಿತ ಚರ್ಚೆ ವೇಳೆ ಮಾತನಾಡಿರುವ ಸಂಸದ ಪಿ.ಸಿ.ಮೋಹನ್, ಭಾರತ ವಿಶ್ವದ ಅತಿ ದೊಡ್ಡ ಲಸಿಕೆ ವಿತರಣೆ ಆಂದೋಲನಕ್ಕೆ ನಾಂದಿ ಹಾಡಿದೆ. ಮುಂದಿನ ಕೆಲವೇ ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ವಿತರಿಸುವ ಗುರಿ ಹೊಂದಿದೆ. ಇದಲ್ಲದೆ 200 ರಾಷ್ಟ್ರಗಳಿಗೂ ಭಾರತ ಸಹಾಯ ಹಸ್ತ ಚಾಚಿದ್ದು, ಜಗತ್ತನ್ನು ಕೋವಿಡ್ ಮುಕ್ತಗೊಳಿಸುವಲ್ಲಿ ಭಾರತ ಮುನ್ನಡೆದಿದೆ. ಭಾರತ ಈಗ ರಕ್ಷಣಾ ವಲಯದಲ್ಲಿ ಸ್ವಾವಲಂಬಿಯಾಗುವತ್ತಾ ಸಾಗಿದೆ. ಅತಿ ದೊಡ್ಡ ರಕ್ಷಣಾ ಒಪ್ಪಂದ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದು, ಈ ವೇಳೆ ಕರ್ನಾಟಕದ ಹೆಚ್ಎಎಸ್ ಸೇವೆ ನೆನೆದಿದ್ದಾರೆ.