ಮೂರಂತಸ್ತಿನ ಕಟ್ಟಡದಿಂದ ಹಾರಿದ ನಿದ್ರಾ ರೋಗಿ! ಲೈವ್ ವಿಡಿಯೋ - Patient jumped from district hospital building,
ಜಿಲ್ಲಾಸ್ಪತ್ರೆಯಲ್ಲಿ ರೋಗಿವೋರ್ವ ಆತಂಕ ಸೃಷ್ಟಿಸಿರುವ ಘಟನೆ ಮಧ್ಯಪ್ರದೇಶದ ಬೈತುಲ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಬಡೇಗಾಂವ್ ನಿವಾಸಿ ಮದನ್ ಸಿಂಗ್ ನಿಗಮ್ ನಿದ್ರಾ ರೋಗದಿಂದ ಬಳಲುತ್ತಿದ್ದ. ಎರಡು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಮಾನಸಿಕ ಖಿನ್ನತೆಗೊಳಗಾದ ಆತ ಭಾನುವಾರ ಬೆಳಗ್ಗೆ ಆಸ್ಪತ್ರೆಯ ಮೂರನೇ ಅಂತಸ್ತಿನ ಶೌಚಾಲಯದ ಕಿಟಕಿಯ ಗಾಜುಗಳನ್ನು ಪುಡಿ ಪುಡಿ ಮಾಡಿ ಅದರಿಂದ ಹೊರಗೆ ಬಂದು ಆತ್ಮಹತ್ಯೆಗೆ ಯೋಚಿಸಿದ್ದ. ಆಸ್ಪತ್ರೆ ಸಿಬ್ಬಂದಿ ಎಷ್ಟೇ ಕಣ್ಣಿಟ್ಟರೂ ಪ್ರಯೋಜನವಾಗಿಲ್ಲ. ಮದನ್ ಸಿಂಗ್ ಅಲ್ಲಿಂದ ಕೆಳಗೆ ಜಿಗಿದಿದ್ದಾನೆ. ಆದ್ರೆ ಸಿಬ್ಬಂದಿ ಕೆಳಗೆ ಟಾರ್ಪಲಿನ್ ಪರದೆಯ ಸಹಾಯದಿಂದ ಆತನನ್ನು ರಕ್ಷಿಸಿದ್ದಾರೆ. ಮೇಲಿಂದ ಬಿದ್ದ ಪರಿಣಾಮ ಮದನ್ ಸಿಂಗ್ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ಹೌಹಾರಿದ್ದಾರೆ.