ವಿಶಾಖಪಟ್ಟಣಂ ತಲುಪಿದ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು - ವಿಡಿಯೋ - Liquid Medical Oxygen
ವಿಶಾಖಪಟ್ಟಣಂ: 100 ಟನ್‌ಗಿಂತಲೂ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಸಾಗಿಸುವ ಸಾಮರ್ಥ್ಯ ಹೊಂದಿರುವ ಏಳು ಖಾಲಿ ಟ್ಯಾಂಕರ್ಗಳನ್ನು ಹೊತ್ತ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು ಆಂಧ್ರಪ್ರದೇಶದ ವಿಶಾಖಪಟ್ಟಣಂ ತಲುಪಿದೆ. ಇಲ್ಲಿನ ಉಕ್ಕಿನ ಘಟಕದಲ್ಲಿ ಟ್ಯಾಂಕರ್ಗಳಿಗೆ ಎಲ್‌ಎಂಒ ತುಂಬಿಸಲಾಗುತ್ತದೆ. ಕೋವಿಡ್ ಉಲ್ಬಣದಿಂದಾಗಿ ಹೆಚ್ಚು ಬೇಡಿಕೆಯಿರುವ ಆಮ್ಲಜನಕದ ಸಿಲಿಂಡರ್ಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಲೆಂದು ಭಾರತೀಯ ರೈಲ್ವೆಯು 'ಆಕ್ಸಿಜನ್ ಎಕ್ಸ್‌ಪ್ರೆಸ್' ವಿಶೇಷ ರೈಲು ಸೇವೆ ಆರಂಭಿಸಿದೆ. ಮೊದಲನೆಯದಾಗಿ ಈ ರೈಲು ಮುಂಬೈನಿಂದ ವಿಶಾಖಪಟ್ಟಣಂಗೆ ಬಂದಿದೆ.