ಕರ್ನಾಟಕ

karnataka

ETV Bharat / videos

ಹೈದರಾಬಾದ್​​ ಮರುನಾಮಕರಣ ದೂರದ ಮಾತು: ಯೋಗಿಗೆ ಓವೈಸಿ ತಿರುಗೇಟು - Asaduddin Owaisi latest news

By

Published : Nov 29, 2020, 9:47 AM IST

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್​ಎಂಸಿ) ಚುನಾವಣೆಯ ಪ್ರಚಾರ ಜೋರಾಗಿದೆ. ಹೈದರಾಬಾದ್ ಮರುನಾಮಕರಣ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್​ನನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ಹೈದರಾಬಾದ್​ನನ್ನು ಮರುನಾಮಕರಣ ಮಾಡಲು ಇಚ್ಛಿಸುತ್ತಿದ್ದಾರೆ. ಅವರು (ಬಿಜೆಪಿ) ಎಲ್ಲಾ ಕಡೆಯೂ ಮರುನಾಮಕರಣ ಮಾಡಲು ಬಯಸುವವರು. ನಿಮ್ಮನ್ನು ಮರು ಹೆಸರಿಸಲಾಗುವುದು, ಆದರೆ ಹೈದರಾಬಾದ್​​ ಅನ್ನು ಅಲ್ಲವೆಂದು ತಿರುಗೇಟು ನೀಡಿದ್ದಾರೆ.

ABOUT THE AUTHOR

...view details