ದೇಶದ ಎಲ್ಲರಿಗೂ ಲಸಿಕೆ ನೀಡುವುದು ನಮ್ಮ ಮುಂದಿರುವ ಸವಾಲು: ಭಾರತದ ಸೆರಂ ಇನ್ಸ್ಟಿಟ್ಯೂಟ್ - ಕೋವಿಡ್ ಲಸಿಕೆ ದೇಶದಲ್ಲಿ ಹಂಚಿಕೆ
ನವದೆಹಲಿ: ನಮ್ಮ ಪ್ಯಾಕ್ಟರಿಯಿಂದ ಕೋವಿಡ್ ಲಸಿಕೆ ವಿತರಣೆಗೊಂಡಿರುವುದು ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಿದ್ದು, 2021ರೊಳಗೆ ದೇಶದ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವುದು ನಮ್ಮ ಮುಂದಿರುವ ಅತಿದೊಡ್ಡ ಸವಾಲಾಗಿದೆ ಎಂದು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಹೇಳಿದ್ದಾರೆ. ಈ ವ್ಯಾಕ್ಸಿನ್ ಆಫ್ರಿಕಾ ಹಾಗೂ ದಕ್ಷಿಣ ಆಫ್ರಿಕಾಗೂ ರವಾನೆ ಮಾಡುವ ಗುರಿ ಹೊಂದಿದ್ದು, ಅನೇಕ ದೇಶಗಳು ಲಸಿಕೆ ನೀಡುವಂತೆ ಪ್ರಧಾನಿ ಕಚೇರಿಗೆ ಪತ್ರ ಬರೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯ ಜನರು, ದುರ್ಬಲರು, ಬಡವರು, ಆರೋಗ್ಯ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ಮೊದಲ 100 ಮಿಲಿಯನ್ ಡೋಸ್ಗಳಿಗೆ 200 ರೂ.ಗಳ ವಿಶೇಷ ಬೆಲೆ ನೀಡಿದ್ದೇವೆ. ತದನಂತರ ಖಾಸಗಿ ಮಾರುಕಟ್ಟೆಗಳಲ್ಲಿ 1000 ರೂ.ಗೆ ಮಾರಾಟ ಮಾಡುತ್ತೇವೆ ಎಂದಿದ್ದಾರೆ.