ಕರ್ನಾಟಕ

karnataka

ETV Bharat / videos

ಯೋಧರ ತ್ಯಾಗ ವ್ಯರ್ಥವಾಗಲ್ಲ, ನಕ್ಸಲರಿಗೆ ಶಸ್ತ್ರಾಸ್ತ್ರಗಳಿಂದಲೇ ಉತ್ತರ: ಅಮಿತ್​ ಶಾ ಗುಡುಗು - ಬಿಜಾಪುರದಲ್ಲಿ ಅಮಿತ್​ ಶಾ

By

Published : Apr 5, 2021, 7:10 PM IST

ಛತ್ತೀಸ್​​ಗಢದಲ್ಲಿ ನಡೆದಿರುವ ಅತಿ ಭೀಕರ ನಕ್ಸಲರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಲ್ಲಿಗೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್​​ ಶಾ, ನಮ್ಮ ಯೋಧರು ಧೈರ್ಯದಿಂದ ಹೋರಾಡಿದ್ದು, ಅವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ದಾರೆ. ಭಾರತ ಸರ್ಕಾರ ಮತ್ತು ಛತ್ತೀಸ್​ಗಢ ಸರ್ಕಾರದ ಮೇಲೆ ನಂಬಿಕೆಯಿಡಿ ಎಂದಿರುವ ಅವರು ನಕ್ಸಲರಿಗೆ ನೇರ ತಿರುಗೇಟು ನೀಡಿದ್ದಾರೆ. ಸಿಆರ್​​​ಪಿಎಫ್​​ ಯೋಧರನ್ನುದ್ದೇಶಿಸಿ ಮಾತನಾಡಿದ ಶಾ, ನಮ್ಮ ಸ್ನೇಹಿತರನ್ನ ಕಳೆದುಕೊಂಡಾಗ ನಿಜಕ್ಕೂ ಬೇಸರವಾಗುತ್ತದೆ. ಈ ಪ್ರದೇಶದಲ್ಲಿ ನಕ್ಸಲರ ಸಮಸ್ಯೆಯಿಂದಾಗಿ ಜನರು ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಶರಣಾಗಲು ಬಯಸುವ ನಕ್ಸಲರಿಗೆ ಸ್ವಾಗತ. ಆದರೆ ಕೈಯಲ್ಲಿ ಗನ್​ ಹಿಡಿದ್ರೆ ಖಂಡಿತವಾಗಿ ಶಸ್ತ್ರಾಸ್ತ್ರಗಳಿಂದಲೇ ಉತ್ತರ ನೀಡುತ್ತೇವೆ ಎಂದಿದ್ದಾರೆ.

ABOUT THE AUTHOR

...view details