1 ಲಕ್ಷದ 8 ವಡೆಗಳಿಂದ ಅಲಂಕೃತಗೊಂಡ ಹನುಮ.. ವಾಯುಪುತ್ರನಿಗೆ ವಿಶೇಷ ಪೂಜೆ - ನಮಕ್ಕಲ್ ಜಿಲ್ಲೆಯ ಆಂಜನೇಯ ಸ್ವಾಮಿಗೆ
ನಮಕ್ಕಲ್ (ತಮಿಳುನಾಡು): ಹನುಮಾನ್ ಜಯಂತಿ ಪ್ರಯುಕ್ತ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಆಂಜನೇಯ ಸ್ವಾಮಿಗೆ 1 ಲಕ್ಷದ 8 ವಡೆಗಳನ್ನು ಅರ್ಪಿಸಲಾಗಿದೆ. ಇಂದು ಬೆಳಗ್ಗೆ 4.45 ರ ಸುಮಾರಿಗೆ ಹನುಮನಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಕಳೆದ ನಾಲ್ಕು ದಿನಗಳಿಂದ ಈ ವಡೆಗಳನ್ನು ತಯಾರಿಸಲಾಗಿದೆ. ವಡೆಗಳಿಂದ ಅಲಂಕೃತಗೊಂಡ ಹನುಮನನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸಿದ್ದರು. ಅಲ್ಲದೆ, ಕೋವಿಡ್ ನಿಯಮ ಅನುಸರಿಸಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.