ಕರ್ನಾಟಕ

karnataka

ETV Bharat / videos

ಬೈಕ್​ಗೆ ಬಸ್​ ಡಿಕ್ಕಿ.. 2 ದಿನದ ಹಿಂದೆ ಮದುವೆಯಾದವನ ಬಲಿ ಪಡೆದ ವಿಧಿ! ಲೈವ್​ ವಿಡಿಯೋ.. - ಉಜ್ಜಯಿನಿ ಅಪಘಾತದ ಸುದ್ದಿ

By

Published : Nov 24, 2019, 7:03 PM IST

ಮಧ್ಯಪ್ರದೇಶ ಉಜ್ಜಿಯನಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬರುತ್ತಿದ್ದ ಬಸ್​. ಬೈಕ್​ನಿಂದ ರಸ್ತೆ ದಾಟುತ್ತಿರುವ ಯುವಕರಿಬ್ಬರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಬೈಕ್​ ನಡೆಸುತ್ತಿದ್ದ ಯುವಕ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details