ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು: ನೀರಿಗಿಳಿದ ಯುವಕರಿಗೆ ಬಸ್ಕಿ ಶಿಕ್ಷೆ - ಕೃಷ್ಣ ನದಿಯ ನೀರಿನ ಮಟ್ಟ ಹೆಚ್ಚಳ
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹ ಪ್ರಕೋಪ ತಣಿಸಲು ವಿಶೇಷ ಕಾರ್ಯಪಡೆ ನಿಯೋಜಿಸಲಾಗಿದೆ. ಈ ನಡುವೆ ಪ್ರವಾಹ ಇದೆ ನೀರಿಗೆ ಇಳಿಯಬೇಡಿ ಎಂಬ ರಕ್ಷಣಾ ಪಡೆಗಳ ಎಚ್ಚರಿಕೆ ಮೀರಿ ಯುವಕರು ನೀರಿಗೆ ಇಳಿದಿದ್ದರಿಂದ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನೀರಿಗಿಳಿದ ಯುವಕರನ್ನ ಹಿಡಿದ ಪೊಲೀಸರು ಅವರಿಗೆ ಉಟಾಬಸ್ಕಿ ಶಿಕ್ಷೆ ನೀಡಿ ಎಚ್ಚರಿಕೆ ನೀಡಿದ್ದಾರೆ. ಸತತ ಮಳೆಯಿಂದಾಗಿ ಕೃಷ್ಣ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಹೀಗಾಗಿ ನದಿ ತೀರದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಘೋಷಣೆ ಮಾಡಲಾಗಿದೆ.