ಕರ್ನಾಟಕ

karnataka

ETV Bharat / videos

ಓದು ಅರ್ಧಕ್ಕೆ ನಿಲ್ಲಿಸಿದ್ದ ಬುಡಕಟ್ಟು ಮಹಿಳೆ: ಈಗ ಯಶಸ್ವಿ ಉದ್ಯಮಿ!! - ಬುಡಕಟ್ಟು ಮಹಿಳೆ ಉಷಾ ರಾಣಿ

By

Published : Jul 28, 2020, 7:55 AM IST

ಮಯೂರ್​ಭಂಜ್​ (ಒಡಿಶಾ): ಅರ್ಧಕ್ಕೆ ತಮ್ಮ ಓದು ನಿಲ್ಲಿಸಿದ ಒಡಿಶಾದ ಮಯೂರ್​ಭಂಜ್​​ ಜಿಲ್ಲೆಯ ಬುಡಕಟ್ಟು ಮಹಿಳೆ ಈಗ ಯಶಸ್ವಿ ಉದ್ಯಮಿಯಾಗಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. 150 ಕ್ಕೂ ಹೆಚ್ಚು ಮಹಿಳೆಯರಿಗೆ ಕೆಲಸ ನೀಡಿ ಅವರ ಜೀವನಕ್ಕೆ ಆಧಾರವಾಗಿದ್ದಾರೆ. ಮದುವೆಯಾದ ನಂತರ ಗುಜಾಲ್ದಿಹಿಗೆ ತೆರಳಿದ ಉಷಾ ರಾಣಿ, ಸ್ವತಂತ್ರ ಬದುಕುಕಟ್ಟಿ ಕೊಳ್ಳಲು ಬಯಸಿದ್ದರು. ಅವರು ಹಲವು ವಿಫಲತೆಗಳ ಬಳಿಕ ಜಿಲ್ಲಾ ಕೈಗಾರಿಕಾ ನಿಗಮದ (ಡಿಐಸಿ) ಸಹಾಯದಿಂದ ಸಬಾಯಿ ಗ್ರಾಸ್‌ನಿಂದ ಕರಕುಶಲ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದರು. ಈ ವ್ಯವಹಾರದಲ್ಲೂ ಆರಂಭದಲ್ಲಿ ಹಿನ್ನೆಡೆ ಸಾಧಿಸಿದರು. ಆದರೆ, ಅಂತಿಮವಾಗಿ ಅದನ್ನ ಲಾಭದಾಯಕವಾಗಿಸಿಕೊಂಡಿದ್ದಾರೆ. ಈ ಮೂಲಕ 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿ ಮಾದರಿಯಾಗಿದ್ದಾರೆ.

ABOUT THE AUTHOR

...view details