ಸೋನು ಸೂದ್ ಹೆಸರಲ್ಲಿ ವೆಲ್ಡಿಂಗ್ ಶಾಪ್: ನಟನಿಗೆ ವಲಸಿಗನ ಗೌರವ - ಕೋವಿಡ್ ಲಾಕ್ಡೌನ್
ಭುವನೇಶ್ವರ್: ಕೋವಿಡ್ ಲಾಕ್ಡೌನ್ನಲ್ಲಿ ಸಿಲುಕಿದ್ದ ವಲಸಿಗರಿಗೆ ಮುಂಬೈ ಮಹಾನಗರಿಯಿಂದ ತಮ್ಮೂರುಗಳಿಗೆ ತೆರಳಲು ನಟ ಸೋನು ಸೂದ್ ಸಹಾಯ ಮಾಡಿದ್ದರು. ಬಸ್, ವಿಮಾನ, ರೈಲು ಪ್ರಯಾಣಕ್ಕೆ ನೆರವು ನೀಡಿದ್ದರು. ಹೀಗೆ ಸಹಾಯ ಪಡೆದು ವಿಮಾನದಲ್ಲಿ ಪ್ರಯಾಣಿಸಿದ ಒಡಿಶಾದ 32 ವರ್ಷದ ಪ್ರಶಾಂತ್ ಕುಮಾರ್ ಪ್ರಧಾನ್, ತಮ್ಮೂರಲ್ಲಿ ವೆಲ್ಡಿಂಗ್ ಅಂಗಡಿಯೊಂದನ್ನು ತೆರೆದಿದ್ದಾರೆ. ಅದಕ್ಕೆ ನಟನ ಹೆಸರನ್ನು ಇಟ್ಟಿದ್ದಾರೆ. ಈ ಮೂಲಕ ತಮ್ಮ ಗೌರವವನ್ನ ಸಲ್ಲಿಸಿದ್ದಾರೆ.