ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ: ಎಮ್ಮೆ ಮುಂದೆ ಪುಂಗಿ ಊದಿ ರೈತನಿಂದ ಅಣಕ!
ನೋಯ್ಡಾ(ಉತ್ತರ ಪ್ರದೇಶ): ಎಮ್ಮೆ ಮುಂದೆ ಪುಂಗಿ ಊದುವ ಮೂಲಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಸರ್ಕಾರವನ್ನು ಅಣಕ ಮಾಡಿದ್ದಾರೆ. ಕೃಷಿ ಕಾನೂನುಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದೆ. ರೈತ ನಾಯಕರೊಂದಿಗೆ ಶನಿವಾರ ನಡೆದ ಐದನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಕೇಂದ್ರವು ಡಿಸೆಂಬರ್ 9 ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಘೋಷಿಸಿದೆ.
Last Updated : Dec 7, 2020, 5:11 PM IST