ಮುಂದಿನ 1000 ವರ್ಷ ಯಾವುದೇ ಭೂಕಂಪನ ಆದ್ರೂ ರಾಮ ಮಂದಿರ ಅಲುಗಾಡಲ್ಲ: ಶೈಲೇಶ್ ಗಾಂಧಿ - No earthquake can shake the foundation of the Ram temple
ಮುಂದಿನ 1,000 ವರ್ಷಗಳಲ್ಲಿ ಯಾವುದೇ ಭೂಕಂಪನವು ರಾಮ ಮಂದಿರದ ಅಡಿಪಾಯವನ್ನು ಅಲುಗಾಡಿಸಲು ಸಾಧ್ಯವಿಲ್ಲ, ದೇವಾಲಯದ ಅಡಿಪಾಯಕ್ಕಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಎಂಟು ಸದಸ್ಯರುಳ್ಳ ಸಮಿತಿಯನ್ನು ರಚಿಸಿ ದೇವಾಲಯದ ಅಡಿಪಾಯಕ್ಕೆ ಬಳಸುವ ಮಣ್ಣಿನ ಪರೀಕ್ಷೆಯನ್ನೂ ಸಹಾ ಮಾಡಲಾಗುತ್ತಿದೆ ಎಂದು ಆ ಸದಸ್ಯರಲ್ಲಿ ಒಬ್ಬರಾದ ಸರ್ದಾರ್ ವಲ್ಲಭಭಾಯ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕ ಶೈಲೇಶ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.