ನಿರ್ಭಯಾ ಅತ್ಯಾಚಾರಿಗಳಿಗೆ ಫೆ.1ಕ್ಕೆ ಗಲ್ಲುಶಿಕ್ಷೆ... ಸಂತ್ರಸ್ತೆಯ ತಾಯಿ ಹೇಳಿದ್ದೇನು!? - ನಿರ್ಭಯಾ ಹತ್ಯಾಚಾರ ಪ್ರಕರಣ
2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದಿದ್ದ ಅರೆವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಹತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಚಿತಗೊಂಡಿದ್ದು, ಜನವರಿ 22ರ ಬದಲಿಗೆ ಫೆ.1ರಂದು ಬೆಳಗ್ಗೆ 6 ಗಂಟೆಗೆ ಅವರಿಗೆ ಗಲ್ಲುಶಿಕ್ಷೆ ವಿಧಿಸಲು ದೆಹಲಿ ಕೋರ್ಟ್ ಡೆತ್ ವಾರೆಂಟ್ ಜಾರಿ ಮಾಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ನಿರ್ಭಯಾ ತಾಯಿ ಮಾತನಾಡಿದ್ದು, ನಾನು ಅಂದುಕೊಂಡಿರುವಂತೆ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಿದ್ದು, ದಿನಾಂಕ ಎಷ್ಟು ಸಲ ಮುಂದೂಡಿಕೆ ಆಗಲು ಸಾಧ್ಯ? ಒಂದಲ್ಲ ಒಂದು ದಿನ ಅವರಿಗೆ ಗಲ್ಲುಶಿಕ್ಷೆ ಆಗಲಿದ್ದು, ನಾನು ಹೋರಾಟ ನಡೆಸಲಿದ್ದಾನೆ ಎಂದು ತಿಳಿಸಿದ್ದಾರೆ.