ದೆಹಲಿಯಲ್ಲಿನ ಹಿಂಸಾಚಾರ ಕುರಿತು ಸಂಸದ ಗೌತಮ್ ಗಂಭೀರ್ ಹೇಳಿದ್ದೇನು? - ಡಿಸಿಪಿ ಅಮಿತ್ ಶರ್ಮಾ
ನವದೆಹಲಿ: ಇಲ್ಲಿನ ಜಾಫ್ರಾಬಾದ್ ಹಿಂಸಾಚಾರದಲ್ಲಿ ಗಾಯಗೊಂಡ ಡಿಸಿಪಿ ಅಮಿತ್ ಶರ್ಮಾ ಅವರ ಆರೋಗ್ಯ ವಿಚಾರಿಸಲು ಬಿಜೆಪಿ ಸಂಸದ ಗೌತಮ್ ಗಂಭೀರ್ ಆಸ್ಪತ್ರೆಗೆ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಹಿಂಸಾಚಾರಕ್ಕೆ ಯಾರು ಪ್ರಚೋದನೆ ನೀಡುತ್ತಾರೋ, ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ದೇಶಕ್ಕೆ ಅಮೆರಿಕ ಅಧ್ಯಕ್ಷರು ಬಂದಾಗಲೇ ಈ ರೀತಿ ಹಿಂಸಾಚಾರ ನಡೆದಿದೆ. ಇದು ಯಾರೋ ಬೇಕು ಅಂತಾ ದೇಶದ ಹೆಸರು ಕೆಡಿಸಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.