ಮಣ್ಣಿನಲ್ಲಿ ನವಜಾತ ಶಿಶು ಹೂತು ಹೋದ ಕಿರಾತಕರು: ದನಗಾಹಿಗಳಿಂದ ರಕ್ಷಣೆ
ನವಜಾತ ಶಿಶುವನ್ನು ಅರ್ಧ ಮಣ್ಣಿನಲ್ಲಿ ಮುಚ್ಚಿಹೋಗಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಎಟಪಾಕಾ ಮಂಡಲದ ಕೃಷ್ಣಾವರಂನಲ್ಲಿ ನಡೆದಿದೆ. ಕೃಷ್ಣಾವರಂನಲ್ಲಿ ದನಗಾಹಿಗಳು ಮಗು ಅಳುವ ಶಬ್ದ ಕೇಳಿ, ಸ್ಥಳಕ್ಕೆ ತೆರಳಿ ನೋಡಿದಾಗ ನವಜಾತ ಶಿಶುವನ್ನು ಅರ್ಧ ಮಣ್ಣಿನಿಂದ ಮುಚ್ಚಿರುವುದು ಬೆಳಕಿಗೆ ಬಂದಿದೆ. ಮಣ್ಣಿನಲ್ಲಿದ್ದ ಕಾರಣ ಕೈ-ಕಾಲು ಹಾಗೂ ಬೆನ್ನಿನ ಭಾಗದಲ್ಲಿ ನವಜಾತ ಶಿಶುವಿಗೆ ಗಾಯಗಳಾಗಿವೆ. ಭದ್ರಾಚಲಂ ಏರಿಯಾ ಆಸ್ಪತ್ರೆಯಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
TAGGED:
ನವಜಾತ ಶಿಶು ಪತ್ತೆ ಸುದ್ದಿ