ಹಾಕಿ ಫೈನಲ್ ಪಂದ್ಯದ ವೇಳೆ ಹೊಡೆದಾಟ... ಮೈದಾನದಲ್ಲೇ ಎರಡು ತಂಡಗಳ ನಡುವೆ ಫೈಟ್!
ನವದೆಹಲಿ: ನೆಹರು ಕಪ್ ಹಾಕಿ ಫೈನಲ್ ಪಂದ್ಯದ ವೇಳೆ ಪಂಜಾಬ್ ಪೊಲೀಸ್ ಹಾಕಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಂಡಗಳ ನಡುವೆ ಗಲಾಟೆ ನಡೆದಿದ್ದು, ಮೈದಾನದಲ್ಲೇ ಎರಡು ತಂಡದ ಆಟಗಾರರು ಹೊಡೆದಾಡಿಕೊಂಡಿದ್ದಾರೆ. ಪಂದ್ಯ ನಡೆಯುತ್ತಿದ್ದ ವೇಳೆ ಎರಡು ತಂಡಗಳ ನಡುವೆ ಜಗಳವಾಗಿದ್ದು, ಅದು ತಾರಕ್ಕೇರಿದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಹಾಕಿ ಇಂಡಿಯಾದ ಸಿಇಒ ಎಲೆನಾ ನಾರ್ಮನ್, ಟೂರ್ನಾಮೆಂಟ್ ಆಯೋಜನೆ ಮಾಡಿದ್ದ ಅಧಿಕಾರಿಗಳ ಅಧಿಕೃತ ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.