20 ದಿನದ ಅವಳಿ ಹೆಣ್ಮಕ್ಕಳನ್ನು ಕೆರೆಗೆ ಎಸೆದ ಪಾಪಿ ತಂದೆ, ಸಾಥ್ ಕೊಟ್ಟ ಪತ್ನಿ
ಸೆಪ್ಟೆಂಬರ್ 22ರಂದು ದೇಶಾದ್ಯಂತ ಮಗಳ ದಿನದ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ. ಆದ್ರೆ ತಂದೆಯೊಬ್ಬ ತನ್ನ 20 ದಿನಗಳ ಅವಳಿ ಹೆಣ್ಮಕ್ಕಳನ್ನು ಕೆರೆಗೆ ಎಸೆದಿದ್ದಾನೆ. ಈ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮುಜಫರ್ ನಗರದ ನಿವಾಸಿ ವಸೀಮ್, ನಜ್ಮಾ ದಂಪತಿಗೆ 20 ದಿನಗಳ ಹಿಂದೆ ಅಫ್ರಿನ್, ಅಫ್ರಿಯಾ ಎಂಬ ಅವಳಿ ಮಕ್ಕಳ ಜನಿಸಿದ್ದವು. ಇಂದು ಬೆಳಗ್ಗೆ ನನ್ನ ಮಕ್ಕಳು ಕಾಣುತ್ತಿಲ್ಲ ಎಂದು ವಸೀಮ್ ಪೊಲೀಸರಿಗೆ ದೂರು ನೀಡಿದ್ದ. ತನಿಖೆ ಕೈಗೊಂಡ ಪೊಲೀಸರಿಗೆ ಅನುಮಾನ ಬಂದು ಮೊದಲು ವಸೀಮ್ನನ್ನೇ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ದ್ವಂದ್ವ ಹೇಳಿಕೆ ನೀಡಿದ್ದರಿಂದ ಆರೋಪಿ ಸುಲಭವಾಗಿ ಖಾಕಿ ಬಲೆಗೆ ಬಿದ್ದಿದ್ದಾನೆ. ಹೆಣ್ಣು ಮಕ್ಕಳನ್ನು ಪೋಷಿಸಲು ಸಾಧ್ಯವಾಗದೇ ಹಿನ್ನೆಲೆ ಮನೆ ಪಕ್ಕದಲ್ಲಿರುವ ಕೆರೆಗೆ ಎಸೆದಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಮಕ್ಕಳ ಶವ ಕೆರೆಯಿಂದ ಹೊರ ತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಕ್ಕಳ ಸಾವಿಗೆ ಪತ್ನಿ ನಜ್ಮಾ ಸಹಕರಿಸಿದ್ದಾಳೆ ಎನ್ನಲಾಗಿದ್ದು, ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.