ಬಣ್ಣಗಳ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮೋದಿ-ಟ್ರಂಪ್... - ಬಣ್ಣಗಳ ಮೂಲಕ ಶಾಂತಿ ಸಂದೇಶ ಸಾರಿದ ಮೋದಿ-ಟ್ರಂಪ್
ನೈನಿತಾಲ್(ಉತ್ತರಾಖಂಡ): ಉತ್ತರಾಖಂಡನ ನೈನಿತಾಲ್ನಲ್ಲಿ ಹೋಳಿ ಹಬ್ಬದ ಅಂಗವಾಗಿ ರಾಮ್ ಸೇವಾಕ್ ಸಭಾ ಹೋಳಿ ಹಾಡು ಎಂಬ ಗಾಯನ ಸ್ಪರ್ಧೆ ಆಯೋಜಿಸಿತ್ತು. ಹಲವು ಮಹಿಳೆಯರು ಬಣ್ಣ-ಬಣ್ಣದ ಉಡುಪು ಧರಿಸಿ ಹಾಡು ಹೇಳಿ ನೃತ್ಯ ಮಾಡುತ್ತಿದ್ದರು. ಆದರೆ ಎಲ್ಲರ ಮಧ್ಯೆ ಗಮನ ಸೆಳೆದದ್ದು ಮೋದಿ ಮತ್ತು ಟ್ರಂಪ್ ವೇಷಧಾರಿಗಳು. ಮೋದಿ ಮತ್ತು ಟ್ರಂಪ್ ಅವರ ವೇಷ ಧರಿಸಿ ಬಣ್ಣಗಳ ಮೂಲಕ ವಿಶ್ವಕ್ಕೆ ಸ್ನೇಹ ಮತ್ತು ಶಾಂತಿಯ ಸಂದೇಶವನ್ನು ಮಹಿಳೆಯರು ಸಾರಿದರು.