ನಾಗ್ಪುರದಲ್ಲಿ 15ರಿಂದ ಲಾಕ್ಡೌನ್: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ್ರು: ವಿಡಿಯೋ
ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾರ್ಚ್ 15ರಿಂದ 21ರವರೆಗೆ ಲಾಕ್ಡೌನ್ ಹೇರಿ ಆದೇಶ ಹೊರಡಿಸಲಾಗಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದ ದೃಶ್ಯ ಕಂಡುಬಂತು. ಇಲ್ಲಿನ ಸೀತಾಬುಲ್ಡಿ ಮುಖ್ಯ ರಸ್ತೆಯಲ್ಲಿ ಶಾಪಿಂಗ್ ಮಾಡಲು ಸಾವಿರಾರು ಜನರು ರಸ್ತೆಗಿಳಿದಿದ್ದು, ಕೋವಿಡ್ ಸೋಂಕು ಮತ್ತಷ್ಟು ಹರಡುವ ಆತಂಕ ಮೂಡಿಸಿದೆ. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಪುಣೆಯಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ.