ಜಮೀನು ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಫೈಟ್... ವಿಡಿಯೋ ವೈರಲ್! - ಜಮೀನು ವಿಚಾರಕ್ಕೆ ಫೈಟ್
ನಾಗ್ಪುರ್: ಜಮೀನು ವಿಚಾರವಾಗಿ ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್ದಲ್ಲಿ ನಡೆದಿದೆ. ಇಲ್ಲಿನ ಭಿವಾಪುರದ ವಾಕೇಶ್ವರ್ ಗ್ರಾಮದ ಜಮೀನಿನಲ್ಲಿ ಸಾಲ ಪಡೆದ ರೈತನ ಪತ್ನಿ ಹಾಗೂ ಹಣ ನೀಡಿದ ಮಹಿಳೆ ಜಮೀನು ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ. 2 ಲಕ್ಷ ರೂ. ಸಾಲ ಪಡೆದುಕೊಳ್ಳುವಾಗ ರೈತನ ಪತ್ನಿ ಜಮೀನು ಅಡವಿಟ್ಟಿದ್ದು, ಇದೀಗ ಹಣ ನೀಡಿದವರು ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಈ ಜಗಳ ನಡೆದಿದೆ ಎನ್ನಲಾಗಿದೆ. ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.