ನನ್ನ ತಂದೆ ಹೀರೋ, ನನ್ನ ಆತ್ಮೀಯ ಗೆಳೆಯ: ಬ್ರಿಗೇಡಿಯರ್ ಲಿಡ್ಡರ್ ಪುತ್ರಿ ಭಾವುಕ ನುಡಿ - ತಮಿಳುನಾಡು ಹೆಲಿಕಾಪ್ಟರ್ ದುರಂತ
ನವದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ವಾಯುಪಡೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಪುತ್ರಿ ಆಶ್ನಾ ಲಿಡ್ಡರ್, ತಂದೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. 'ನನ್ನ ತಂದೆ ಹೀರೋ, ನನ್ನ ಆತ್ಮೀಯ ಸ್ನೇಹಿತ. ಅವರು ಹೇಳಿಕೊಟ್ಟ ಉತ್ತಮ ವಿಷಯಗಳನ್ನು ನಾನು ಜೀವನದಲ್ಲಿ ಅಳವಡಿಸಿಕೊಳ್ಳುವೆ' ಎಂದರು.