ಯುಗಾದಿಯಂದು ತಿಮ್ಮಪ್ಪನ ದರ್ಶನ ಮಾಡುವ ಮುಸ್ಲಿಂ ಭಕ್ತರು.. ಹೀಗೊಂದು ವಿಶೇಷ..! - ಹಿಂದೂ ದೇವಾಲಕ್ಕೆ ಮುಸ್ಲಿಂ ಭಕ್ತರ ಭೇಟಿ
ಕಡಪ: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನ ಭಾವೈಕ್ಯತೆಗೆ ಸಾಕ್ಷಿಯಾಗಿದ್ದು, ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಯುಗಾದಿ ದಿನ ಮುಸ್ಲಿಂ ಭಕ್ತರು ಭಗವಾನ್ ಬಾಲಾಜಿ ಪತ್ನಿ ಗೋದಾದೇವಿ ದರ್ಶನ ಪಡೆದು ಪುನೀತರಾದರು. ಉಗಾದಿ ಹಬ್ಬದ ಮುನ್ನಾದಿನದಂದು ಮುಸ್ಲಿಂ ಭಕ್ತರು ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಶ್ರೀನಿವಾಸನ ಪತ್ನಿ ಗೋದಾದೇವಿಯನ್ನು ಇಲ್ಲಿನ ಮುಸ್ಲಿಂ ಭಕ್ತರು 'ಬೀಬಿ ನಂಚಾರಿ' ಎಂದು ಕರೆಯುತ್ತಾರೆ. ಪ್ರಾಚೀನ ಕಾಲದಿಂದಲೂ ಅವರು ಅನುಸರಿಸುತ್ತಿರುವ ಪದ್ಧತಿಯ ಭಾಗವಾಗಿ ಪ್ರಾರ್ಥನೆ ಸಲ್ಲಿಸಲು ಹೆಚ್ಚಿನ ಜನರು ಈ ದೇವಾಲಯಕ್ಕೆ ಬರುತ್ತಾರೆ. ಸ್ವಾಮಿ ದರ್ಶನ ಪಡೆದು ಸಕಲ ಪೂಜಾ ವಿಧಿ ವಿಧಾನಗಳನ್ನು ಸಮರ್ಪಿಸುತ್ತಾರೆ. ಪ್ರತಿ ಉಗಾದಿ ಹಬ್ಬದ ದಿನದಂದು ಮಾತ್ರ ಮುಸ್ಲಿಂ ಭಕ್ತರು ಸ್ವಾಮಿ ದರ್ಶನಕ್ಕೆ ಬರುವುದು ಇಲ್ಲಿನ ವಾಡಿಕೆ ಎಂದು ದೇವಾಲಯದ ಅರ್ಚಕರು ತಿಳಿಸಿದರು.