ಸಿಟಿ ಸೆಂಟರ್ನಲ್ಲಿ ಅಗ್ನಿ ಅವಘಡ: 56 ಗಂಟೆಗಳ ಕಾರ್ಯಾಚರಣೆ ಬಳಿಕ ನಿಯಂತ್ರಣಕ್ಕೆ ಬಂದ ಬೆಂಕಿ - Mumbai Fire
ಮುಂಬೈ (ಮಹಾರಾಷ್ಟ್ರ): ಅಕ್ಟೋಬರ್ 22ರ ರಾತ್ರಿ ಮುಂಬೈನ ಸಿಟಿ ಸೆಂಟರ್ ಮಾಲ್‌ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಬರೋಬ್ಬರಿ 56 ಗಂಟೆಗಳ ಕಾರ್ಯಾಚರಣೆ ಬಳಿಕ ನಿಯಂತ್ರಣಕ್ಕೆ ಬಂದಿದೆ. 50 ಅಗ್ನಿಶಾಮಕ ವಾಹನಗಳು, 16 ಜಂಬೋ ಟ್ಯಾಂಕರ್ಗಳ ಮೂಲಕ ಸುಮಾರು 250 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಕಾರ್ಯಾಚರಣೆ ವೇಳೆ ಆರು ಸಿಬ್ಬಂದಿ ಗಾಯಗೊಂಡಿದ್ದಾರೆ.