ತಮ್ಮೂರಿಗೆ ಕಳುಹಿಸುವಂತೆ ವಲಸೆ ಕಾರ್ಮಿಕರ ಪಟ್ಟು; ಪರಿಸ್ಥಿತಿ ನಿಭಾಯಿಸಲು ಮುಂಬೈ ಪೊಲೀಸರಿಂದ ಲಾಠಿಚಾರ್ಜ್
ದೇಶಾದ್ಯಂತ ಲಾಕ್ಡೌನ್ ಮೇ 3ರವರೆಗೆ ಮುಂದುವರಿದಿದೆ. ಇದರಿಂದ ವಲಸೆ ಕಾರ್ಮಿಕರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಮಹಾರಾಷ್ಟ್ರದ ಬಾಂದ್ರಾ ರೈಲ್ವೆ ಸ್ಟೇಷನ್ ಬಳಿ ಬೇರೆ ಬೇರೆ ರಾಜ್ಯಗಳಿಂದ ಕೂಲಿ ಕೆಲಸ ಮಾಡಲು ವಲಸೆ ಬಂದಿದ್ದ ಜನರು ತಮ್ಮ ರಾಜ್ಯಗಳಿಗೆ ಕಳುಹಿಸುವಂತೆ ಪ್ರತಿಭಟನೆ ನಡೆಸಿದರು. ಭಾರಿ ಸಂಖ್ಯೆಯಲ್ಲಿ ಸೇರಿದ ಕಾರ್ಮಿಕ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಅಂತಿಮವಾಗಿ ಜನರು ಪೊಲೀಸರ ಮನವಿಗೆ ಸ್ಪಂದಿಸದೇ ಇದ್ದಾಗ ಲಾಟಿ ಬೀಸಿದರು. ಈ ವೇಳೆ ಕಾರ್ಮಿಕರು ದಿಕ್ಕಾಪಾಲಾಗಿ ಓಡಿಹೋದ ಘಟನೆ ನಡೆಯಿತು.
Last Updated : Apr 14, 2020, 6:58 PM IST