ವಸಂತ್‌ಕುಂಜ್ ಪ್ರದೇಶದಲ್ಲಿ ಫ್ಲೈಓವರ್ ಬಳಿ ರಸ್ತೆ ಕುಸಿತ - ವಸಂತ್‌ಕುಂಜ್ ಪ್ರದೇಶದಲ್ಲಿ ಫ್ಲೈಓವರ್ ಬಳಿ ರಸ್ತೆ ಕುಸಿತ
ನವದೆಹಲಿ: ರಾಜಧಾನಿಯ ವಸಂತ್‌ಕುಂಜ್ ಪ್ರದೇಶದಲ್ಲಿ ಫ್ಲೈಓವರ್ ಬಳಿ ರಸ್ತೆ ಕುಸಿದು ಬಿದ್ದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರಿ ಪೊಲೀಸರು ರಸ್ತೆಯನ್ನು ಮುಚ್ಚಿದ್ದಾರೆ. ರಸ್ತೆ ಕುಸಿದು ಬಿದ್ದಿರುವ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಸಂಸದ ರಮೇಶ್ ಬಿಧೂಡಿ ದೆಹಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ಗರಂ ಆಗಿದ್ದಾರೆ.