ಲೋಕಸಭೆಯಲ್ಲೂ ಕೊರೊನಾ ವೈರಸ್ ಭೀತಿ... ಮಾಸ್ಕ್ ಧರಿಸಿಕೊಂಡೇ ಮಾತನಾಡಿದ ಮಹಿಳಾ ಸಂಸದೆ! - ಮಾಸ್ಕ್ ಧರಿಸಿಕೊಂಡು ಮಾತನಾಡಿದ ಮಹಿಳಾ ಸಂಸದೆ
ಚೀನಾದಲ್ಲಿ ಅಬ್ಬರಿಸಿರುವ ಮಹಾಮಾರಿ ಕೊರೊನಾ ಭೀತಿ ಇದೀಗ ಭಾರತದಲ್ಲೂ ಶುರುವಾಗಿದ್ದು, ವಿವಿಧ ನಗರಗಳಲ್ಲಿ ಕೆಲವೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರ ಭಯ ಇದೀಗ ಲೋಕಸಭೆಯಲ್ಲೂ ಶುರುವಾಗಿದ್ದು, ಅಧಿವೇಶನದಲ್ಲಿ ಭಾಗಿಯಾಗಲು ಬರುತ್ತಿರುವ ಕೆಲವರು ಮಾಸ್ಕ್ ಹಾಕಿಕೊಂಡು ಆಗಮಿಸುತ್ತಿದ್ದಾರೆ. ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದ ಪಕ್ಷೇತರ ಮಹಿಳಾ ಸಂಸದೆ ನವನೀತಾ ರವಿ ರಾಣಾ ಲೋಕಸಭೆಯಲ್ಲಿ ಇಂದು ಮಾಸ್ಕ್ ಹಾಕಿಕೊಂಡು ಮಾತನಾಡಿದ್ದಾರೆ.