ತಾಯಿ ಮೇಲೆ ಕಲ್ಲು ಎತ್ತಾಕಿ, ಮಗುವಿನ ಕತ್ತು ಕುಯ್ದು ಕೊಲೆ... ಬೆಚ್ಚಿಬಿದ್ದ ಆಂಧ್ರಪ್ರದೇಶ! - ಪ್ರಕಾಶಂ ಅಪರಾಧ ಸುದ್ದಿ
ಆಂಧ್ರಪ್ರದೇಶದಲ್ಲಿ ತಾಯಿ-ಮಗಳಿಗೆ ಚಿತ್ರಹಿಂಸೆ ನೀಡಿ, ಕೊಲೆ ಮಾಡಿ ಬಳಿಕ ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ. ಪ್ರಕಾಶಂ ಜಿಲ್ಲೆಯ ಮದ್ದಿಪಾಡು ತಾಲೂಕಿನ ಕೊತ್ತಪಲ್ಲಿ ಗ್ರಾಮದ ಹೊರವಲಯದಲ್ಲಿ ಸುಟ್ಟು ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ತಾಯಿ-ಮಗಳನ್ನು ದಾರುಣವಾಗಿ ಹತ್ಯೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಮಹಿಳೆಯ ತಲೆ ಕಲ್ಲು ಎತ್ತಿ ಹಾಕಿ ಮತ್ತು ಒಂದೂವರೆ ವರ್ಷದ ಹೆಣ್ಣು ಮಗುವಿನ ಕತ್ತು ಕುಯ್ದು ಕೊಲೆ ಮಾಡಿರುವುದು ತನಿಖೆಯಲ್ಲಿ ತಿಳಿದಿದೆ. ಕೊಲೆಯಾದ ಮಹಿಳೆಯ ವಿವರಗಳು ತಿಳಿಯಬೇಕಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.