ಹನುಮಾನ್ಗಡಿಯಲ್ಲಿ ನಮೋ ವಿಶೇಷ ಪೂಜೆ... ಪ್ರಧಾನಿಗೆ ಬೆಳ್ಳಿ ಕಿರೀಟ ಉಡುಗೊರೆ! - ಅಯೋಧ್ಯೆ ಶ್ರೀರಾಮ ಮಂದಿರ
ಅಯೋಧ್ಯೆ: ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ ಅಯೋಧ್ಯೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ಕಾರ್ಯಕ್ರಮಕ್ಕೂ ಮುಂಚಿತವಾಗಿ ಹನುಮಾನ್ಗಡಿ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಭಾರತೀಯ ಸಂಪ್ರದಾಯದಂತೆ ರೇಷ್ಮೆ ಧೋತಿ ಹಾಗೂ ಕುರ್ತಾ ತೊಟ್ಟು ರಾಮ ಜನ್ಮಭೂಮಿಗೆ ಆಗಮಿಸಿದ್ದರು. ಹನುಮನಿಗೆ ಪೂಜೆ ಸಲ್ಲಿಸಿದ ನಮೋಗೆ ಅಲ್ಲಿನ ಅರ್ಚಕರು ಬೆಳ್ಳಿ ಕಿರೀಟ ಉಡುಗೊರೆಯಾಗಿ ನೀಡಿದರು.