ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಖದೀಮರು: ಇವರನ್ನು ಯುವಕರು ಹಿಡಿದ ಪರಿ ಅದ್ಭುತ! - ನವದೆಹಲಿಯ ಅಪರಾಧ ಸುದ್ದಿ
ಸಿಲಿಂಡರ್ ಡಿಲಿವರಿ ಮಾಡುತ್ತಿದ್ದ ವ್ಯಕ್ತಿಯಿಂದ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಸ್ಥಳೀಯ ಯುವಕರು ಹಿಡಿದಿರುವ ಘಟನೆ ವಾಯವ್ಯ ದೆಹಲಿಯ ಉಸ್ಮಾನ್ಪುರದಲ್ಲಿ ನಡೆದಿದೆ. ಖದೀಮರು ಪರಾರಿಯಾಗುತ್ತಿದ್ದ ಬೈಕ್ ಅನ್ನು ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯು ತಳ್ಳಿ, ಅವರನ್ನು ಕೆಳಗೆ ಬೀಳಿಸಿ ಹಿಡಿಯಲಾಗಿದೆ. ನಂತರ ದರೋಡೆಕೋರರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಈ ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.