ಕರ್ನಾಟಕ

karnataka

ETV Bharat / videos

ವ್ಯಾಪಾರಿ ಬೆದರಿಸಿ 90 ಲಕ್ಷ ಬೆಲೆ ಚಿನ್ನಾಭರಣ ದೋಚಿದ ಮುಸುಕುಧಾರಿಗಳು: ವಿಡಿಯೋ - Uttar pradesh latest news

By

Published : Jan 7, 2021, 1:01 PM IST

ಪ್ರತಾಪಗಢ(ಉತ್ತರಪ್ರದೇಶ): ಇಲ್ಲಿನ ಕೊಟ್ವಾಲಿಯ ಸಿಯಾಂಬಿಹಾರಿ ಗಲ್ಲಿಯಲ್ಲಿರುವ ಶಿವ ಜ್ಯುವೆಲ್ಲರ್ಸ್ ಅಂಗಡಿಗೆ ನುಗ್ಗಿದ ಮುಸುಕುಧಾರಿಗಳು ಸುಮಾರು 90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೈಯಲ್ಲಿ ಗನ್​ ಹಿಡಿದು, ಮುಸುಕು ಧರಿಸಿ ಅಂಗಡಿಯೊಳಗೆ ಬಂದ ದುಷ್ಕರ್ಮಿಗಳು ಮಾಲೀಕನನ್ನು ಬೆದರಿಸಿ, 5 ಸಾವಿರ ರೂ. ಮತ್ತು 90 ಲಕ್ಷ ರೂ. ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯನ್ನು ಕದ್ದು ಪರಾರಿಯಾಗಿದ್ದಾರೆ. ಇನ್ನು ಈ ಸಂಬಂಧ ಪೊಲೀಸರು ಕೇಸ್​​ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details