ಫೋಟೋ ಕ್ಲಿಕ್ಕಿಸಿಕೊಳ್ಳುವಲ್ಲೇ ಎಲ್ಲರೂ ಬ್ಯುಸಿ: ಹಣ, ಒಡವೆಗಳ ಬ್ಯಾಗ್ ಕದ್ದು ಖದೀಮ ಪರಾರಿ - ಒಡಿಶಾದ ಭುವನೇಶ್ವರ
ಭುವನೇಶ್ವರ್: ಮದುವೆ ಸಮಾರಂಭವೊಂದರಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವಲ್ಲಿ ಎಲ್ಲರೂ ಬ್ಯುಸಿಯಾಗಿದ್ದ ವೇಳೆ ಅತಿಥಿ ವೇಷದಲ್ಲಿ ಬಂದಿದ್ದ ಕಳ್ಳ ಸಮಯ ಸಾಧಿಸಿ, ಹಣ, ಒಡವೆಗಳಿದ್ದ ಬ್ಯಾಗ್ ಅನ್ನು ಕದ್ದು ಪರಾರಿಯಾಗಿದ್ದಾನೆ. ಒಡಿಶಾದ ಭುವನೇಶ್ವರ್ನ ಚಂದ್ರಶೇಖಪುರ್ನಲ್ಲಿ ಹೋಟೆಲ್ ಒಂದರಲ್ಲಿ ಉದ್ಯಮಿಯೊಬ್ಬರು ಆಯೋಜಿಸಿದ್ದ ವೆಡ್ಡಿಂಗ್ ರಿಸಪ್ಷನ್ನಲ್ಲಿ ಘಟನೆ ನಡೆದಿದ್ದು, ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.