ಹರಿದ ಜೀನ್ಸ್ ಬಗ್ಗೆ ಅಲ್ಲ, ದೆಹಲಿ ಮಾಲಿನ್ಯದ ಬಗ್ಗೆ ಗಮನ ಹರಿಸಿ: ಪ್ರಿಯಾಂಕಾ ಚತುರ್ವೇದಿ - ಮಹಿಳೆಯರು ಹರಿದ ಜೀನ್ಸ್
ನವದೆಹಲಿ: ಮಹಿಳೆಯರು ಹರಿದ ಜೀನ್ಸ್ ಹಾಕಿಕೊಳ್ಳುವುದು ಅದ್ಯಾವ ಸಂಸ್ಕೃತಿ? ಇದರಿಂದ ಯಾವ ಸಂದೇಶ ನೀಡಬಲ್ಲರು ಎಂದು ಉತ್ತರಾಖಂಡ ಸಿಎಂ ವಿವಾದಿತ ಹೇಳಿಕೆ ನೀಡುತ್ತಿದ್ದಂತೆ ಅವರ ವಿರುದ್ಧ ಮಹಿಳೆಯರು ತಿರುಗಿಬಿದ್ದಿದ್ದು, ಇದೇ ವಿಚಾರ ಇದೀಗ ರಾಜ್ಯಸಭೆಯಲ್ಲೂ ಚರ್ಚೆಯಾಗಿದೆ. ಮಹಾರಾಷ್ಟ್ರದ ಸಂಸದೆ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, ಪರಿಸರ ಸಚಿವರು ದೆಹಲಿ ಮಾಲಿನ್ಯದ ಬಗ್ಗೆ ಕಾಳಜಿ ವಹಿಸಬೇಕು. ಹರಿದ ಜೀನ್ಸ್ ಧರಿಸುವ ಮಹಿಳೆಯರ ಬಗ್ಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಸದ್ಯ ದೆಹಲಿಯಲ್ಲಿ ಮಾಲಿನ್ಯ ಗಂಭೀರ ವಿಷಯವಾಗಿದೆ ಎಂದಿದ್ದಾರೆ.
Last Updated : Mar 18, 2021, 3:14 PM IST