ಕರ್ನಾಟಕದ ಬಾಲಕಿ ಮನವಿಗೆ ಮಿಡಿದ ಹೃದಯ... ಚಿಕಿತ್ಸೆಗಾಗಿ ಹಣ ನಿಡಿದ ಸಚಿವ ಕೆಟಿಆರ್ ಸ್ನೇಹಿತ! - ತೆಲಂಗಾಣ ಸಚಿವ ಕೆಟಿಆರ್
ಹೈದರಾಬಾದ್: ಬೆಂಗಳೂರಿನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಶಿಲ್ಪಾ ರೆಡ್ಡಿಗೆ ಈಗಾಗಲೇ ಟಾಲಿವುಡ್ ಹೀರೋ ಮಹೇಶ್ ಬಾಬು ಸಹಾಯದಿಂದ ಶಸ್ತ್ರಚಿಕಿತ್ಸೆ ಕೊಡಿಸಲಾಗಿದೆ. ಇದೀಗ ನಡೆದಾಡಲು ಬೇಕಾದ ಬೆಲ್ಟ್ ಸೇರಿದಂತೆ ಇತರ ಅಗತ್ಯ ಸಾಮಗ್ರಿಗಳಿಗಾಗಿ ಆರ್ಥಿಕ ನೆರವು ನೀಡುವಂತೆ ಸಚಿವ ಕೆಟಿಆರ್ ಬಳಿ ಮನವಿ ಮಾಡಿಕೊಂಡು ಬಾಲಕಿಯೇ ಪತ್ರ ಬರೆದಿದ್ದಳು. ಆದರೆ, ಬಾಲಕಿ ಕರ್ನಾಟಕದವಳಾಗಿರುವ ಕಾರಣ ತೆಲಂಗಾಣ ಸರ್ಕಾರದಿಂದ ಆರ್ಥಿಕ ನೆರವು ನೀಡಲು ಬರುವುದಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಕೆಟಿಆರ್ ಸ್ನೇಹಿತರೊಬ್ಬರು ಶಿಲ್ಪಾಗೆ 90 ಸಾವಿರ ರೂ ಚೆಕ್ ನೀಡಿ, ಬಾಲಕಿಗೆ ಸಹಾಯ ಮಾಡಿದ್ದಾರೆ.
Last Updated : Nov 16, 2019, 5:32 PM IST