'ಮಹಾ' ಹೈಡ್ರಾಮಾ ಬಗೆಗಿನ ಸಂಸದ ಹೆಗ್ಡೆ ಹೇಳಿಕೆ ಶುದ್ಧ ಸುಳ್ಳು: ಮಾಜಿ ಸಿಎಂ ಫಡ್ನವೀಸ್ - ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಫಡ್ನವೀಸ್ ಪ್ರತಿಕ್ರಿಯೆ
ಮುಂಬೈ: ಫಡ್ನವೀಸ್ ಸರ್ಕಾರ ರಚಿಸಿದ್ದು ಮಹಾಮೈತ್ರಿಕೂಟದಿಂದ ಸಿಎಂ ನಿಧಿ(40,000 ಕೋಟಿ) ರಕ್ಷಣೆಗಾಗಿ ಎಂದಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಅವರ ಹೇಳಿಕೆಯನ್ನು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸ್ಪಷ್ಟ ಶಬ್ದಗಳಲ್ಲಿ ಅಲ್ಲಗಳೆದಿದ್ದಾರೆ. ನನ್ನ 80 ಗಂಟೆಯ ಅಧಿಕಾರದಲ್ಲಿ ಸಿಎಂ ನಿಧಿ ವರ್ಗಾವಣೆಯಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಫಡ್ನವೀಸ್ ಸ್ಪಷ್ಟನೆ ನೀಡಿದ್ದಾರೆ.