ಕರ್ನಾಟಕ

karnataka

ETV Bharat / videos

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಕೇರಳದ ​ಮೆಗಾ ಮೋಹಿನಿಯಟ್ಟಂ - Mega Mohiniyattam featured in Guinness Book of World Records

By

Published : Jan 19, 2020, 5:52 PM IST

ತ್ರಿಸ್ಸುರ್ (ಕೊಚ್ಚಿ): ಇಲ್ಲಿನ ತೆಕ್ಕಿಂಕಾಡು ಮೈದಾನದಲ್ಲಿ ಸುಮಾರು 4,706 ನರ್ತಕಿಯರ ಮೆಗಾ ಮೋಹಿನಿಯಟ್ಟಂ ಪ್ರದರ್ಶನವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ ಸೇರಿದೆ. ಏಕಮಾಕಂ ಮೆಗಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ‘ಕುಂಡಲಿ ನಿಪ್ಪಟ್ಟು’ ಆಧಾರಿತ ನೃತ್ಯ ಪ್ರದರ್ಶನಗೊಂಡಿತು. ನರ್ತಕರಿಗೆ ಖ್ಯಾತ ನರ್ತಕಿ ಕಲಾಮಂಡಲಂ ಡಾ.ಧನುಷಾ ಸನ್ಯಾಲ್ ತರಬೇತಿ ನೀಡಿದ್ದರು. ಈ ಹಾಡನ್ನು ಸಂಗೀತ ಸಂಯೋಜಕ ಮತ್ತು ಪಿಟೀಲು ವಾದಕ ಎಡಪ್ಪಲ್ಲಿ ಅಜಿತ್ ಕುಮಾರ್ ಸಂಯೋಜಿಸಿದ್ದಾರೆ ಮತ್ತು ಗಾಯಕ ಮಧು ಬಾಲಕೃಷ್ಣನ್ ಕಂಠದಲ್ಲಿ ಮೂಡಿಬಂದಿದೆ. ಮೆಗಾ ಮೋಹಿನಿಯಟ್ಟಂ ಪ್ರದರ್ಶನವನ್ನು ಕೇಂದ್ರ ಸಚಿವ ವಿ.ಮುರಳೀಧರನ್ ಉದ್ಘಾಟಿಸಿದರು. ಸಚಿವರಾದ ವಿ.ಎಸ್.ಸುನೀಲ್ ಕುಮಾರ್ ಮತ್ತು ಸಿ.ರವೀಂದ್ರನಾಥ್, ಧಾರ್ಮಿಕ ಗುರು ರವಿಶಂಕರ ಗುರೂಜಿ ಉಪಸ್ಥಿತರಿದ್ದರು.

ABOUT THE AUTHOR

...view details