ಮಾವೋವಾದಿ ನಾಯಕನ ಬಂಧನದ ವಿರುದ್ಧ ಪ್ರತಿಭಟನೆ : ಬ್ರಿಡ್ಜ್ ಸ್ಫೋಟಗೊಳಿದ ನಕ್ಸಲರು - Resistance week by Naxalites in Jharkhand
ಗಿರಿದಿಹ್ (ಜಾರ್ಖಂಡ್): ಮಾವೋವಾದಿ ನಾಯಕ ಪ್ರಶಾಂತ್ ಬೋಸ್ ಮತ್ತು ಅವರ ಪತ್ನಿಯ ಬಂಧನವನ್ನು ಖಂಡಿಸಿ ಜನವರಿ 21ರಿಂದ 'ಪ್ರತಿರೋಧ ಸಪ್ತಾಹ'ವನ್ನು ಆಚರಿಸುತ್ತಾ ಜಾರ್ಖಂಡ್ನಲ್ಲಿ ನಕ್ಸಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲ ದಿನ ಎರಡು ಮೊಬೈಲ್ ಟವರ್‌ಗಳನ್ನು ಸ್ಫೋಟಿಸಿದ್ದ ನಕ್ಸಲರು, ನಿನ್ನೆ ಗಿರಿದಿಹ್ ಜಿಲ್ಲೆಯ ಬರಾಕರ್ ನದಿಯ ಮೇಲೆ ಕಟ್ಟಲಾಗಿದ್ದ ಸೇತುವೆಯನ್ನು ಸ್ಫೋಟಿಸಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡುತ್ತಿರುವ ಮಾವೋವಾದಿಗಳ ಕೃತ್ಯಕ್ಕೆ ಸ್ಥಳೀಯರು ಭಯಭೀತರಾಗಿದ್ದಾರೆ. ಆರೋಪಿ ನಕ್ಸಲರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.