ಅದ್ಧೂರಿ ಕೊನಾರ್ಕ್ ಉತ್ಸವ: ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್ - ಮಣಿಪುರಿ ನೃತ್ಯ ಪ್ರದರ್ಶನ
ಒಡಿಶಾ: ಕೊನಾರ್ಕ್ ಉತ್ಸವ ಮತ್ತು ಅಂತಾರಾಷ್ಟ್ರೀಯ ಮರಳು ಕಲಾ ಉತ್ಸವ 2020ರ ಅಂಗವಾಗಿ 2ನೇ ದಿನ(ಬುಧವಾರ) ಮಣಿಪುರಿ ನೃತ್ಯ ಪ್ರದರ್ಶನ ಜರುಗಿತು. ತೆರೆದ ಸಭಾಂಗಣದಲ್ಲಿ ಮೊದಲು ಮಣಿಪುರಿ ನೃತ್ಯವನ್ನು ಪ್ರದರ್ಶಿಸಲಾಯಿತು ನಂತರ ಬೆಂಗಳೂರು ಮೂಲದ ತಂಡಗಳು ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸಿದರು. ಕೋಲ್ಕತ್ತಾದ ಮಣಿಪುರಿ ನೃತ್ಯ ತಂಡ ಕೂಡಾ ಗಮನ ಸೆಳೆಯಿತು. ಮಣಿಪುರಿ ನರ್ತನಾಲಯದ ನೇತೃತ್ವವನ್ನು ಖ್ಯಾತ ನೃತ್ಯ ಸಂಯೋಜಕ ಬಿಂಬಾವತಿ ದೇವಿ ವಹಿಸಿದ್ದರು. 2ನೇ ಕಾರ್ಯಕ್ರಮವಾದ ಒಡಿಸ್ಸಿ ನೃತ್ಯವನ್ನು, ಶರ್ಮಿಳಾ ಮುಖರ್ಜಿ ನೇತೃತ್ವದಲ್ಲಿ ಬೆಂಗಳೂರಿನ ಸಂಜಲಿ ತಂಡವು ಪ್ರದರ್ಶಿಸಿತು. ಚಂದ್ರಭಾಗ ಬೀಚ್ನಲ್ಲಿ ಕಲಾವಿದರು ಸಮುದ್ರ ತೀರದ ಜನ-ಜೀವನ, ಜನಾಂಗೀಯ ಸಂಸ್ಕೃತಿ ಮತ್ತು ಕೋವಿಡ್-19 ಜಾಗೃತಿ ವಿಷಯಗಳ ಮೇಲೆ ಮರಳಿನ ಶಿಲ್ಪಗಳನ್ನು ರಚಿಸಿದ್ದರು.
Last Updated : Dec 3, 2020, 7:27 AM IST