ಸಾಲ ಕೊಟ್ಟವನಿಂದ ಕಿರುಕುಳ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ - ತಮಿಳುನಾಡು ಇತ್ತೀಚಿನ ನ್ಯೂಸ್
ಕೊಯಮತ್ತೂರು (ತಮಿಳುನಾಡು): ಸಾಲ ನೀಡಿದ್ದ ವ್ಯಕ್ತಿ ನೀಡಿರುವ ಕಿರುಕುಳ ತಾಳಲಾರದೇ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದು, ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯ್ಕುಮಾರ್ ಎಂಬ ವ್ಯಕ್ತಿ ಜಯಪ್ರಕಾಶ್ ಅವರಿಂದ 20 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಮೂರು ತಿಂಗಳ ನಂತರ 11 ಸಾವಿರ ರೂ ಹಿಂದುರುಗಿಸಿದ್ದಾನೆ. ಉಳಿದ ಹಣ ಪಾವತಿ ಮಾಡುವಂತೆ ಮೇಲಿಂದ ಮೇಲೆ ಬೆದರಿಕೆ ಹಾಗೂ ಕಿರುಕುಳ ನೀಡಿದ್ದರಿಂದ ವಿಜಯ್ ಪ್ರಕಾಶ್ ಬೆಂಕಿ ಹಚ್ಚಿಕೊಂಡು ಜೀವಂತ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಗೆ ಇದೀಗ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.