ತಲಾಖ್ಗೆ ನಿರಾಕಾರ... ಮಗಳ ಮುಂದೆನೇ ಹೆಂಡ್ತಿನ ಸುಟ್ಟ ಗಂಡ! ವಿಡಿಯೋ... - undefined
ತಲಾಖ್ಗೆ ನಿರಾಕರಿಸಿದ ಪತ್ನಿಯನ್ನು ಪತಿಯೊಬ್ಬ ಸೀಮೆ ಎಣ್ಣೆ ಎರಚಿ ಮಗಳ ಮುಂದೆನೇ ಸುಟ್ಟಿರುವ ಘಟನೆ ಉತ್ತರಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ. ಹೆಂಡ್ತಿ, ಮಗಳನ್ನು ಸ್ವಗ್ರಾಮದಲ್ಲಿ ಬಿಟ್ಟು ರಫಿಕ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ. ಫೋನ್ ಮೂಲಕ ಹೆಂಡ್ತಿಗೆ ತ್ರಿಪಲ್ ತಲಾಖ್ ನೀಡಿದ್ದಾನೆ. ಇದಕ್ಕೆ ಹೆಂಡ್ತಿ ನಿರಾಕರಿಸಿದ್ದಾರೆ. ಇದರಿಂದ ಮನೆಗೆ ಬಂದ ರಫಿಕ್ ಹೆಂಡ್ತಿಯನ್ನು ಹಲ್ಲೆಗೊಳಿಸಿ ಐದು ವರ್ಷದ ಮಗಳ ಮುಂದೆನೇ ಸೀಮೆ ಎಣ್ಣೆ ಎರಚಿ ಸುಟ್ಟು ಹಾಕಿದ್ದಾನೆ. ತಾಯಿಯನ್ನು ಕಳೆದುಕೊಂಡ ಮಗಳು ಮತ್ತು ಮಗಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.