ಕರ್ನಾಟಕ

karnataka

ETV Bharat / videos

ದುಷ್ಕರ್ಮಿಗಳ ಅಟ್ಟಹಾಸ... ನೋಡ ನೋಡುತ್ತಿದ್ದಂತೆ ವ್ಯಕ್ತಿಯ ಬರ್ಬರ ಕೊಲೆ! - ತಿರುಪತಿ ವ್ಯಕ್ತಿ ಕೊಲೆ ಸುದ್ದಿ

By

Published : Dec 22, 2019, 4:18 AM IST

ತಿರುಪತಿ: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ಬೆಲ್ಟರ್​ ಮುರುಳಿ ಅಲಿಯಾಸ್​ ಆಟೋ ಮುರುಳಿ ಎಂಬಾತನೆ ಕೊಲೆಗೀಡಾದ ವ್ಯಕ್ತಿ. ತಿರುಮಲ ಬೈಪಾಸ್​ ರಸ್ತೆ ಬಳಿಯ ಫಾಸ್ಟ್​ ಫುಡ್​ ಸೆಂಟರ್​ ಬಳಿ ಘಟನೆ ನಡೆದಿದ್ದು, ನೋಡ ನೋಡುತ್ತಿದ್ದಂತೆ ದುಷ್ಕರ್ಮಿಗಳು ಮಚ್ಚು, ಲಾಂಗ್​ಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ಮುರುಳಿ ತಿರುಪತಿ ಪಶ್ಚಿಮ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದ ಹತ್ಯೆ ಪ್ರಕರಣವೊಂದಲ್ಲಿ ಆರೋಪಿಯಾಗಿದ್ದ. ಹಳೇ ದ್ವೇಷದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ಇದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ABOUT THE AUTHOR

...view details