ಕರ್ನಾಟಕ

karnataka

ETV Bharat / videos

ಸಿಎಂ ಮಮತಾ ಕಾಲಿಗೆ ಗಾಯ ಆಗಿಲ್ವಾ? ಪ್ರಶ್ನೆ ಹುಟ್ಟು ಹಾಕಿದ ವಿಡಿಯೋ - ಪಶ್ಚಿಮ ಬಂಗಾಳ ಚುನಾವಣೆ

By

Published : Apr 2, 2021, 8:59 PM IST

Updated : Apr 2, 2021, 9:26 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸ್ತಿದ್ದ ವೇಳೆ ಮಮತಾ ಬ್ಯಾನರ್ಜಿ ಕಾಲಿಗೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿತ್ತು. ಇದೇ ಕಾರಣಕ್ಕಾಗಿ ಅವರು ತಮ್ಮ ಕಾಲಿಗೆ ಬ್ಯಾಂಡೆಡ್​ ಸುತ್ತಿಕೊಂಡು ಅನೇಕ ಪ್ರಚಾರ ಸಭೆ, ರ‍್ಯಾಲಿಗಳಲ್ಲಿ ಭಾಗಿಯಾಗಿದ್ದರು. ಪ್ರಮುಖವಾಗಿ ವ್ಹೀಲ್​ ಚೇರ್​ ಮೇಲೆ ಕುಳಿತು ಭಾಷಣ ಸಹ ಮಾಡಿದ್ರು. ಇದೀಗ ವೈರಲ್​ ಆಗಿರುವ ವಿಡಿಯೋವೊಂದು ಅವರ ಕಾಲಿಗೆ ಗಾಯ ಆಗಿಲ್ವಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ವ್ಹೀಲ್ ಚೇರ್​ ಮೇಲೆ ಕುಳಿತುಕೊಂಡಿರುವ ಮಮತಾ ನೋವು ಆಗಿರುವ ಕಾಲನ್ನು ಸರಾಗವಾಗಿ ಅಲುಗಾಡಿಸುತ್ತಿರುವುದು ಹಾಗೂ ಒಂದರ ಮೇಲೆ ಮತ್ತೊಂದು ಕಾಲು ಹಾಕಿ ಕುಳಿತುಕೊಳ್ಳುತ್ತಿರುವ ವಿಡಿಯೋ ವೈರಲ್​​ ಆಗಿದೆ. ಈ ಬಗ್ಗೆ ಬಿಜೆಪಿ ಪ್ರಶ್ನೆ ಮಾಡಿದೆ.
Last Updated : Apr 2, 2021, 9:26 PM IST

ABOUT THE AUTHOR

...view details