ನಂದಿಗ್ರಾಮದಲ್ಲಿ ಗೆಲ್ಲಿಸುವಂತೆ ಶಿವನ ಮೊರೆ ಹೋದ ಸಿಎಂ ಮಮತಾ: ವಿಡಿಯೋ - ನಂದಿಗ್ರಾಮದಿಂದ ಮಮತಾ ಕಣಕ್ಕೆ
ನಂದಿಗ್ರಾಮ: ನನಗೆ ಹಿಂದೂ ಧರ್ಮದ ಪಾಠ ಮಾಡಲು ಬರಬೇಡಿ, ನಾನು ಬ್ರಾಹ್ಮಣಳು ಎಂದು ಆಕ್ರೋಶ ಹೊರಹಾಕಿದ್ದ ಮಮತಾ ಬ್ಯಾನರ್ಜಿ ಇಂದು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂದಿಗ್ರಾಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ದೀದಿ, ಅಲ್ಲಿನ ಶಿವನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವಿಚಾರವಾಗಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಇದೇ ಮೊದಲ ಸಲ ಮಮತಾ ಬ್ರಾಹ್ಮಣರು ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ಈ ಹಿಂದೆ ಹಿಜಬ್ ಧರಿಸುತ್ತೇನೆ, ಪ್ರಾರ್ಥಿಸುತ್ತೇನೆ ಮತ್ತು ಮುಸ್ಲಿಮರನ್ನು ರಕ್ಷಿಸುತ್ತೇನೆ ಎಂದಿದ್ದರು. ಆದರೆ ಇದೀಗ ಬಿಜೆಪಿ ಪಶ್ಚಿಮ ಬಂಗಾಳಕ್ಕೆ ಬರುತ್ತಿದ್ದಂತೆ ತಾವು ಹಿಂದೂತ್ವವಾದಿ ಎಂದು ಸಾಬೀತುಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.