ಕಾಲೇಜ್ ಶುಲ್ಕ ಮನ್ನಾ ಮಾಡಲು ಸಚಿವರ ಕಾರು ತಡೆ: ಎಬಿವಿಪಿ ಸದಸ್ಯನ ಮೇಲೆ ಪೊಲೀಸರ ಹಲ್ಲೆ!
ಮಹಾರಾಷ್ಟ್ರ: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಮನ್ನಾ ಮಾಡುವಂತೆ ವಿನಂತಿಸಲು ರಾಜ್ಯ ಸಚಿವ ಅಬ್ದುಲ್ ಸತ್ತಾರ್ ಅವರ ವಾಹನ ನಿಲ್ಲಿಸಿ ಮನವಿ ಮಾಡಲು ಯತ್ನಿಸಲಾಗಿದೆ. ಈ ವೇಳೆ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸದಸ್ಯನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ.