ಮಹಾರಾಷ್ಟ್ರದಲ್ಲಿ ರಾಜ್ಯಾವ್ಯಾಪಿ ಕರ್ಫ್ಯೂಗೆ ಸಿಎಂ ಆದೇಶ... ಅಂತರಜಿಲ್ಲಾ ಸಾರಿಗೆ ಸೇವೆ ಕೂಡ ಸ್ಥಗಿತ - ಕೊವಿಡ್-19
ಪುಣೆ: ಅಂತಾರಾಜ್ಯಗಳಿಗೆ ಸಂಚಾರ ನಿರ್ಬಂಧ ಹೇರಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ಅಂತರಜಿಲ್ಲಾ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿದ್ದು, ರಾಜ್ಯಾವ್ಯಾಪಿ ಕರ್ಫ್ಯೂ ಘೋಷಿಸಿದೆ. ಇನ್ನೂ ಕೋವಿಡ್-19ಗೆ ಒಳಗಾಗದ ಜಿಲ್ಲೆಗಳಿಗೆ ಸೋಂಕು ಹರಡಲು ನಾವು ಬಿಡುವುದಿಲ್ಲ. ಎಲ್ಲ ಧಾರ್ಮಿಕ ಕೇಂದ್ರಗಳು ಬಂದ್ ಆಗಲಿವೆ. ಜನರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ. ದಿನಸಿ ವಸ್ತುಗಳು, ಹಾಲು, ಬೇಕರಿ, ಮೆಡಿಕಲ್ನಂತಹ ಅಗತ್ಯ ಸೇವೆಗಳು ದೊರಕಲಿವೆ ಎಂದು ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಇನ್ನು ಪುಣೆಯಲ್ಲಿ ನಿರ್ಬಂಧದ ನಡುವೆಯೂ ಇಂದು ಬೆಳಗ್ಗೆಯಿಂದ ಉಂಟಾಗಿದ್ದ ಜನಸಂದಣಿಯನ್ನು ಪೊಲೀಸರು ತೆರವುಗೊಳಿಸಿದ್ದಾರೆ.