ಉದ್ಧವ್ ಠಾಕ್ರೆ ಜೊತೆ 6 ಮಂದಿ ಪ್ರಮಾಣ.. ಹಾಗಿದ್ದರೆ ಡಿಸಿಎಂ ಯಾರು..? - NCP leader Ajith Pawar
ಮುಂಬೈ: ಇಂದಿನ ಪ್ರಮಾಣ ವಚನಕ್ಕೆ ಸಂಬಂಧಿಸಿದಂತೆ ಎನ್ಸಿಪಿ ನಾಯಕ ಅಜಿತ್ ಪವಾರ್ ಸ್ಪಷ್ಟನೆ ನೀಡಿದ್ದು, ಮೂರು(ಎನ್ಸಿಪಿ, ಶಿವಸೇನೆ,ಕಾಂಗ್ರೆಸ್) ಪಕ್ಷದಿಂದ ಒಟ್ಟು ಆರು ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ. ಇಂದು ನಾನು ಪ್ರಮಾಣ ವಚನ ಸ್ವೀಕರಿಸುತ್ತಿಲ್ಲ. ಡಿಸಿಎಂ ಬಗ್ಗೆ ಪಕ್ಷ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.