ಸಂವಿಧಾನದ ಮೇಲೆ ಪ್ರತಿಜ್ಞೆಗೈದು ಕೈಹಿಡಿದ ಅಪರೂಪದ ಜೋಡಿ!! - Madhya Pradesh couple ties knot by exchanging vows over Constitution
ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಜೋಡಿಯೊಂದು ಭಾರತದ ಸಂವಿಧಾನದ ಪ್ರತಿ ಮೇಲೆ ಪ್ರತಿಜ್ಞೆ ಮಾಡುವ ಮೂಲಕ ಪರಸ್ಪರ ವಿವಾಹ ಬಂಧನಕ್ಕೊಳಗಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಚಿತ್ರಕ್ಕೆ ಹೂಮಾಲೆ ಹಾಕುವ ಮೂಲಕ ಸಂವಿಧಾನದ ಸಾಕ್ಷಿಯಾಗಿ ಮದುವೆಯಾಗಿದ್ದಾರೆ. ಲಾಕ್ಡೌನ್ ಇರುವುದರಿಂದ ವಿವಾಹಕ್ಕೆ ಜಿಲ್ಲಾಡಳಿತದ ಅನುಮತಿ ಪಡೆದ ವರ ಸಂತೋಷ್ ಮಾಲ್ವಿಯಾ ಹಾಗೂ ವಧು ಇಮ್ರಾತ್ ಮಾಲ್ವಿಯಾ, ದೇವಾಲಯವೊಂದರಲ್ಲಿ ಹಸೆಮಣೆ ಏರಿದ್ದಾರೆ.