'ಮೆಲನ್ ಮೆಡ್ಲೆ': ವಿವಿಧ ಹಣ್ಣುಗಳ ಜ್ಯೂಸ್ ಕುಡಿದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ - ಮೆಲನ್ ಮೆಡ್ಲೆ ಮಾಡುವ ವಿಧಾನ
ಹಣ್ಣುಗಳಲ್ಲಿ ಅಗತ್ಯವಾದ ಪೋಷಕಾಂಶಗಳು ಇರುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ತುಂಬುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ವಿವಿಧ ಹಣ್ಣುಗಳನ್ನು ಸೇರಿಸಿ ತಿನ್ನುವುದಕ್ಕಿಂತಲೂ ಜ್ಯೂಸ್ ಮಾಡಿ ಕುಡಿಯುವುದು ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಮತ್ತು ಉತ್ತಮ ಮಾರ್ಗವಾಗಿದೆ. ದ್ರವ ರೂಪದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಕೂಡ ಸಮರ್ಪಕವಾಗಿ ನಡೆಯುತ್ತದೆ. ‘ಲಾಕ್‌ಡೌನ್ ರೆಸಿಪಿ’ ಸರಣಿಯಲ್ಲಿ ಇಂದು ನಾವು ಕರಬೂಜ, ಕಿತ್ತಳೆ, ನಿಂಬೆ ಹಣ್ಣಿನಿಂದ ತಯಾರಿಸುವ 'ಮೆಲನ್ ಮೆಡ್ಲೆ' ಹೆಸರಿನ ಮಾಕ್ಟೇಲ್ಅನ್ನು ನಿಮಗೆ ಪರಿಚಯಿಸುತ್ತಿದ್ದೇವೆ.